Index   ವಚನ - 277    Search  
 
ಆಕಾಶವ ಕಪ್ಪೆ ನುಂಗಿದಡೆ ಆಗಳೆ ರಾಹು! ಹತ್ತಿತ್ತಲ್ಲಾ ನೋಡಿರೆ; ಅಪೂರ್ವ ಅತಿಶಯವ! ಅಂಧಕ ಹಾವ ಹಿಡಿದ. ಇದು ಕಾರಣ, ಲೋಕಕ್ಕೆ ಅರುಹದೆ, ನಾನು ಅರಿದೆನು ಗುಹೇಶ್ವರಾ.