ವಚನ - 278     
 
ನೀರ ಸುಟ್ಟ ಕಿಚ್ಚಿನ ಬೂದಿಯ ಮರ್ಮವ ಬಲ್ಲಡೆ, ನೀವು ಹೇಳಿರೆ? ಬಯಲ ಸುಟ್ಟ ಕಿಚ್ಚಿನ ಬೂದಿಯ ಕಂಡಡೆ, ನೀವು ಹೇಳಿರೆ? ವಾಯು ನಿಂದ ಸ್ಥಾನಕ್ಕವ, ಗುಹೇಶ್ವರ ನಿಂದ ನಿಲವ. ಕಂಡಡೆ, ನೀವು ಹೇಳಿರೆ?