Index   ವಚನ - 21    Search  
 
ತನುವಿನೊಳಗೆ ತನುವಾಗಿ, ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ ಕೆಲಬರಿಗೆ ಅರಿಯಬಪ್ಪುದೆ? ಅಂತರಂಗದೊಳಗೆ ಅದೆ ಎಂದಡೇನು? ಮನ ಮುಟ್ಟುವನ್ನಕ್ಕರ ಕಾಣಬಾರದು. ಬಹಿರಂಗದಲ್ಲಿ ಅದೆ ಅಂದಡೇನು? ಪೂಜಿಸುವನ್ನಕ್ಕರ ಕಾಣಬಾರದು. ಸಾಕಾರವಲ್ಲದ ನಿರಾಕಾರ ಲಿಂಗವು ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು. ಎನ್ನ ಮನದೊಳಗೆ ಘನವನನುಗೊಳಿಸಿ ತೋರುವರಿಲ್ಲದ ಕಾರಣ ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ ಬೆರಗಾದೆ ಕಾಣಾ ಪ್ರಭುವೆ.