Index   ವಚನ - 36    Search  
 
ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ, ದಿಟಪುಟವನತಿಗಳೆದು ಸಟೆಯ ಬಳಸುವರೆ? ಅಂತರಂಗದ ಶುದ್ಧಿಯ ಬಹಿರಂಗಕ್ಕೆ ತಂದು ಸಂತೈಸಲರಿಯದೆ ಮರುಳಾದಿರಣ್ಣಾ. ಜಂತ್ರದ ಕೀಲಕೂಟದ ಸಂಚದ ಭೇದವು ತಪ್ಪಿ, ಮಂತ್ರಭಿನ್ನವಾಗಿ ನುಡಿವರೆ ಅಜಗಣ್ಣಾ.