Index   ವಚನ - 7    Search  
 
ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ. ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ. ಗುರು ತೋರಿದ್ದು ಒಂದೇ ದೇವರು ಸಾಕು, [ಎನ್ನಯ್ಯ ಪ್ರಿಯ] ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.