Index   ವಚನ - 8    Search  
 
ಆರು ಮಣಿಗೆ ದಾರವನೇರಿಸಿ, ಕುಣಿಕೆಗೆ ಮಣಿಯಿಲ್ಲದೆ ಅರಸುತ್ತಿದ್ದರಲ್ಲಾ ತತ್ವಜ್ಞರು. ಇದು ಆದಿಯ ಕ್ರೀ, ಅನಾದಿಯ ಜ್ಞಾನ. ಈ ಉಭಯವ ಭೇದಿಸಿದಡೆ ಕುಣಿಕೆಯ ಮಣಿ ತಲಪಿಗೇರಿತ್ತು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವು ಏಕವೆಂದಲ್ಲಿ.