Index   ವಚನ - 9    Search  
 
ಆವ ಬೀಜವ ಬಿತ್ತಿದಡೂ ಪೃಥ್ವಿಗೆ ಬೇರು, ಬಯಲಿಂಗೆ ಶಾಖೆ ತಲೆದೋರಿ ಬೆಳೆವಂತೆ ಐಕ್ಯಕ್ಕೆ ಮರೆ, ಕ್ರೀಗೆ ಬಾಹ್ಯ. ಉಭಯದ ಭೇದವುಳ್ಳನ್ನಕ್ಕ ಭಕ್ತಿಯ ಹೋರಾಟ ಬಿಡದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ ಮಣಿಯುಳ್ಳನ್ನಕ್ಕ ಪವಣಿಕೆಯ ಹಂಗು ಬಿಡದು.