Index   ವಚನ - 19    Search  
 
ಕರ್ಮದೊಳಗಣ ಸತ್ಕರ್ಮ, ಮರ್ಮದೊಳಗಣ ನಿಜವರ್ಮ, ಅರಿವಿನೊಳಗಣ ಅರಿವ, ತೆರಹದೊಳಗಣ ತೆರವ ಕುರುಹಿಟ್ಟು, ಕುರುಹ ಕುರುಹು ಅವಗವಿಸಿ, ಅಭಿನ್ನವಿಲ್ಲದೆ ನಿರ್ವಾಹ ನಿರ್ಲೇಪವಾದುದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು ತಾನೆ ಕುರುಹು ಅರಿವಾದನು.