ಸ್ವಸ್ಥಾನ ಸ್ವಸ್ಥಿರದ ಸುಮನಮಂಟಪದೊಳಗೆ,
ನಿತ್ಯನಿರಂಜನ ಪ್ರಭೆಯೊಳಗೆ,
ಶಿವಯೋಗದನುಭಾವವೇಕಾರ್ಥವಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮಸುಖಿಯಾಗಿರ್ದನು.
Transliteration Svasthāna svasthirada sumanamaṇṭapadoḷage,
nityaniran̄jana prabheyoḷage,
śivayōgadanubhāvavēkārthavāgi,
guhēśvarā nim'ma śaraṇananupamasukhiyāgirdanu.
Hindi Translation स्वस्थान सुस्थिर सुमन मंटप में
नित्य निरंजन प्रभा की कांति !
शिवयोगानुभाव एकार्थ होकर
गुहेश्वरा , तुम्हारा शरण अनुपम सुखी हुआ था।
Translated by: Eswara Sharma M and Govindarao B N
Tamil Translation தன் நிலையில் நிலைத்துள்ள தூயமன மண்டபத்திலே
நிலைத்த புனிதமான பிராணலிங்கப் பேரொளி
சிவயோக அனுபவத்தில் ஒருமித்து குஹேசுவரனே
உம் சரணன் ஒப்பற்ற பேரின்பத்தி லுளான் அன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು sಸ್ವಸ್ಥಾನ = ತನ್ನ ಸ್ಥಾನ, ಮನಸ್ಸಿನ ಸ್ಥಾನ, ಮನಸ್ಸು ನೆಲೆಸಿ ವ್ಯವಹರಿಸುವ ಸ್ಥಾನ, ಅದು ಹೃದಯ; ಏಕಾರ್ಥವಾಗು = ಒಂದಾಗು; ನಿರಂಜನ = ನಿಷ್ಕಲಂಕ, ಪವಿತ್ರ; ಶಿವಯೋಗದನುಭಾವ = ಪ್ರಾಣಲಿಂಗದ ಅನುಸಂಧಾನ, ಪ್ರಾಣಲಿಂಗದಲ್ಲಿ ತದೇಕತಾನತೆ; ಸುಮನ = ವಿಶುದ್ದ ಮನಸ್ಸು; ಸುಸ್ಥಿರ = ನಿಶ್ಚಲವಾದ;
Written by: Sri Siddeswara Swamiji, Vijayapura