Index   ವಚನ - 31    Search  
 
ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ, ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ ಅದಕ್ಕೆ ಭಿನ್ನಭಾವವಾವುದು? ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು, ಆ ಕುಂಭಂಗಳಿಗೆ ಒಳಗೆ ಮುಟ್ಟಿದಡೂ ಹೊರಗೆ ಮುಟ್ಟಿದಡೂ ಪಾಕಪ್ರಯತ್ನ ತಪ್ಪದಾಗಿ. ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ, ಒಳಗಣ ಜ್ಞಾನಸಂಬಂಧವು; ಉಭಯದ ತತ್ತಿಲ್ಲ. ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ? ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ ಗುಟ್ಟಿನ ಕುಲವಿಲ್ಲ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವು ಸ್ವಯಾನುಭಾವಸಿದ್ಧನಾದ ಕಾರಣ.