Index   ವಚನ - 39    Search  
 
ನಿಚ್ಚಣಿಕೆಯನೇರಿ ತೆಗೆವುದಕ್ಕೆ ಮುಂದೊಂದಟ್ಟಳೆಯಲ್ಲಿ ಬಯಕೆ ಲಕ್ಷಿಸಿದ್ದಿತ್ತು. ಬಯಕೆಯುಳ್ಳನ್ನಕ್ಕ ನಿಚ್ಚಣಿಕೆಯನೆತ್ತುತ್ತ ಇಳುಹುತ್ತ ಈ ಕೃತ್ಯದಲ್ಲಿ ಸಾಯಲಾರೆ. ಎನ್ನಯ್ಯಾ, ಎನಗೊಂದು ಗೊತ್ತ ತೋರಾ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.