Index   ವಚನ - 42    Search  
 
ನೀರಿನ ಮೇಲೆ ಧರೆ ಹೊರೆಯಾಗಿ ಮತ್ತಾ ನೀರನಾಶ್ರಯಿಸಿಕೊಂಡಿಪ್ಪಂತೆ, ಬೀಜದ ಸಾರ ಬಲಿದು ಬೀಜವಾಗಿ ಆ ಸಾರ ಬೀಜವನಿಂಬಿಟ್ಟುಕೊಂಡಿಪ್ಪಂತೆ, ನಿರವಯವಸ್ತು ಕುರುಹಾಗಿ ಆ ಕುರುಹಿಂಗೆ ತಾನರಿವಾಗಿ ಭಾವಿಸಿಕೊಂಬಂತೆ, ದರ್ಪಣದಲ್ಲಿ ತನ್ನೊಪ್ಪವ ಕಾಣಿಸಿಕೊಂಬ ದೃಕ್ಕು ದರ್ಪಣದಿಂದೆಂದಡೆ ನಿಶ್ಚಯವಲ್ಲ; ದೃಕ್ಕಿನಿಂದೆಂದಡೆ ಇದಿರಿಟ್ಟು ಲಕ್ಷಿಸಬೇಕು. ಇದು ಭಿನ್ನವಲ್ಲ, ಅಭಿನ್ನವಲ್ಲ, ಕ್ರಿಯೆಯಲ್ಲ, ನಿಃಕ್ರಿಯೆಯಲ್ಲ; ಇದು ಭಿನ್ನವಲ್ಲ, ನಿರ್ಭಾವವಲ್ಲ. ಅಹುದು ಅಲ್ಲವೆಂಬ ಸಂದೇಹ ಸಂಧಿಸಿ ನಿಂದಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು ಸ್ವಯವಾದ ಸಂಬಂಧಸ್ಥಲ.