Index   ವಚನ - 46    Search  
 
ಪೂಜಿಸುವವರ ಕಂಡವರ ಕಂಡು, ಆ ಗುಣವ ತಾ ಕೈಕೊಂಡು ಪೂಜಿಸದೆ ವಾಗ್ಬ್ರಹ್ಮವ ನುಡಿವವರ ಕಂಡು, ಶೇಷವನು ಈಚೆಯಲ್ಲಿ ನುಡಿಯದೆ, ತನ್ನ ಸ್ವಯಾನುಭಾವ ಪೂಜೆ, ತನ್ನ ಸ್ವಯಸಿದ್ಭವಾದ ನುಡಿ, ಇಂತೀ ಉಭಯಸ್ಥಲಗೂಡಿ, ಕ್ಷೀರ ನೀರಿನಂತೆ ಹೊರೆಯಿಲ್ಲದೆ ವರ್ಣಭೇದವಿಲ್ಲದೆ ಕೂಡಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.