Index   ವಚನ - 53    Search  
 
ಭಕ್ತಂಗೆ ಭಕ್ತಸ್ಥಲವಲ್ಲದೆ ಮಾಹೇಶ್ವರಸ್ಥಲದಲ್ಲಿ ನಿಲ್ಲ; ಮಾಹೇಶ್ವರಂಗೆ ಮಾಹೇಶ್ವರಸ್ಥಲವಲ್ಲದೆ ಪ್ರಸಾದಿಸ್ಥಲದಲ್ಲಿ ನಿಲ್ಲ; ಪ್ರಸಾದಿಗೆ ಪ್ರಸಾದಿಸ್ಥಲವಲ್ಲದೆ ಪ್ರಾಣಲಿಂಗಿಸ್ಥಲದಲ್ಲಿ ನಿಲ್ಲ; ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲವಲ್ಲದೆ ಶರಣಸ್ಥಲದಲ್ಲಿ ನಿಲ್ಲ; ಶರಣಂಗೆ ಶರಣಸ್ಥಲವಲ್ಲದೆ ಐಕ್ಯಸ್ಥಲದಲ್ಲಿ ನಿಲ್ಲ; ಐಕ್ಯಂಗೆ ಐಕ್ಯಸ್ಥಲವಲ್ಲದೆ ಮಹಾಬೆಳಗಿನ ಕಳೆಗೆ ನಿಲುಕ. ಅದು ಪೂರ್ಣಭಾವ ಪರಿಪೂರ್ಣವಾಗಿಪ್ಪುದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಭಕ್ತಿಕಾರಣವಾಗಿ ಸ್ಥಲಂಗಳಿಗೆ ಗೊತ್ತಾದ ಭೇದ.