Index   ವಚನ - 54    Search  
 
ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ನೈಷ್ಠೆ, ಪ್ರಸಾದಿಗೆ ಅಯೋಚಿತ, ಪ್ರಾಣಲಿಂಗಿಗೆ ಮುಟ್ಟಿದಲ್ಲಿ ಅರ್ಪಿತಭೇದ, ಶರಣಂಗೆ ದೃಷ್ಟದಲ್ಲಿ ಮುನ್ನವೆ ಬಿಡುಗಡೆ, ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೆ ನಿರಾಳ. ಇಂತೀ ಷಟ್‍ಸ್ಥಲವಾದ ಭೇದ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವು ಎನಗೆ ಉಮಾಮಹೇಶ್ವರನಾದಹನೆಂದು.