ಸಂಸಾರಸಂಗದಿಂದಲುದಯಿಸಿದ
ಸಾರ ಸುಖವೆ ದುಃಖವೆಂದರಿಯದೆ,
ಆ ಸುಖವನೆ ಮೆಚ್ಚಿ ಭವದುಃಖವೆಂಬ ಕ್ರೂರ ಜನ್ಮಚಕ್ರಕ್ಕೀಡಾಗಿ,
ಅಲ್ಲಿ ತನ್ನ ಮರೆದು, ತನಗಿಲ್ಲದುದ ಭ್ರಮೆಯಿಂದ ತನ್ನದೆಂದು,
ಅಂತಪ್ಪ ಭವಘೋರ ನರಕದೊಳಾಳುತ್ತ ಮುಳುಗಾಡುತಿಪ್ಪ
ಅಜ್ಞಾನಿಜೀವಿಗಳು ನಿಮ್ಮನೆತ್ತಬಲ್ಲರಯ್ಯಾ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sansārasaṅgadindaludayisida
sāra sukhave duḥkhavendariyade,
ā sukhavane mecci bhavaduḥkhavemba krūra janmacakrakkīḍāgi,
alli tanna maredu, tanagilladuda bhrameyinda tannadendu,
antappa bhavaghōra narakadoḷāḷutta muḷugāḍutippa
ajñānijīvigaḷu nim'manettaballarayyā
ennayyapriya im'maḍi niḥkaḷaṅka mallikārjunā.