Index   ವಚನ - 68    Search  
 
ಸ್ಥಾಣು ನರನೆಂದು, ರಜ್ಜು ಸರ್ಪನೆಂದು, ಸ್ಫಟಿಕದ ಘಟದಲ್ಲಿ ನಿಂದ ಗಜ ದಿಟವೆಂದು ನಿಬದ್ಧಿಸಿ ನೋಡಲಿಕ್ಕಾಗಿ, ಸಂದೇಹ ನಿಂದಲ್ಲಿ ಮುನ್ನಿನಂದವೆ ಆ ನಿಜಗುಣ? ಈ ಸಂದೇಹ ನಿವೃತ್ತಿಯಾದಲ್ಲಿ ಇಷ್ಟ ಪ್ರಾಣಲಿಂಗವೆಂಬ ಉಭಯದ ದೃಷ್ಟ ಒಂದೆ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.