•  
  •  
  •  
  •  
Index   ವಚನ - 287    Search  
 
ಏಳು ತಾಳ[ದ] ಮೇಲೆ ಕೇಳುವ ಸುನಾದ, ಸ್ಥೂಲ ಸೂಕ್ಷ್ಮ ಕೈಲಾಸದ ರಭಸ, ಗಂಗೆವಾಳುಕಸಮಾರುದ್ರರ ತಿಂಥಿಣಿ, ಗಗನಗಂಭೀರದ ಶಿವಸ್ತುತಿಯ ನೋಡಲೊಡನೆ ಪಿಂಡ ಬ್ರಹ್ಮಾಂಡವಾಯಿತ್ತು, ಅಖಂಡ ನಿರಾಳ ಗುಹೇಶ್ವರಾ.
Transliteration Ēḷu tāḷa[da] mēle kēḷuva sunāda, sthūla sūkṣma kailāsada rabhasa, gaṅgevāḷukasamārudrara tinthiṇi, gaganagambhīrada śivastutiya nōḍaloḍane piṇḍa brahmāṇḍavāyittu, akhaṇḍa nirāḷa guhēśvarā.
Hindi Translation सात तालों में सुननेवाला सुनाद , स्थूल सूक्ष्म कैलास का आनंद , गंगवाळुकसमारुद्र समूह गगन गंभीर शिवस्तुति देखें तो पिंड ब्रम्हांड हुआ, अखंडित निराला गुहेश्वरा। Translated by: Eswara Sharma M and Govindarao B N
Tamil Translation ஏழு தாளத்தின் மீது கேட்கும் சுநாதம் தூல, சூட்சுமத்தில் கைலாசத்தின் பிரணவநாதம் விரைந்து இறங்கும் எதிரொலி கங்கை நதிக்கரையின் மணல்துகள்களின் எண்ணிக்கையையொத்த உருத்திர திரள் ஆகாயமண்டலத்தின் சிவத்துதியை கேட்டதுமே பிண்ட உணர்வு பிரம்மாண்டமாயிற்று. முழுமையான, தூயோன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಏಳು ತಾಳ = ಏಳು ಚಕ್ರಗಳು-ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಘಂಟಿಕಾಮೂಲ ಹಾಗೂ ಭ್ರೂಮಧ್ಯ ಚಕ್ರಗಳು; ಕೈಲಾಸದ ರಭಸ = ಶಿವಸ್ಥಾನ; ಗಂಗೆವಾಳುಕಸಮಾರುದ್ರರ = ಗಂಗೆಯ ದಡದೊಳಗಿರುವ ಮರಳುಕಣಗಳ ಸಂಖ್ಯೆಗೆ ಸಮನಾದ ಅಸಂಖ್ಯ ರುದ್ರರು; ಶಿವನ ಊಳಿಗದವರು; ತಿಂಥಿಣಿ = ಅವರ ಬೃಹತ್ ಸಮೂಹ; ಸುನಾದ = ಅನಾಹತ ಪ್ರಣವನಾದ; ಸೂಕ್ಷ್ಮ = ಸೂಕ್ಷ್ಮ ಶರೀರ, ದೇಹ ಹಾಗೂ ಮನಸ್ಸು; ಸ್ಥೂಲ = ಸ್ಥೂಲ ಶರೀರ; Written by: Sri Siddeswara Swamiji, Vijayapura