Index   ವಚನ - 70    Search  
 
ಹೃತ್ಕಮಲಮಧ್ಯದಲ್ಲಿಪ್ಪ ಲಿಂಗವ ಸರ್ವಾಂಗದಲ್ಲಿ ವೇಧಿಸಿ, ಪರಿಪೂರ್ಣವಪ್ಪ ಲಿಂಗವ ಅಂತರ್ಮುಖದಿಂದ ಬಹಿರ್ಮುಖಕ್ಕೆ ತಂದು, ಪಂಚಸ್ಥಾನದಲ್ಲಿಪ್ಪ ಲಿಂಗವ ಕರಸ್ಥಲದಲ್ಲಿ ಮೂರ್ತಿಗೊಳಿಸಲಿಕ್ಕಾಗಿ, ಕಂಗಳು ತುಂಬಿ, ಬಾಹ್ಯದೃಷ್ಟಿಯರತು, ಲಿಂಗದೃಷ್ಟಿ ಪರಿಪೂರ್ಣವಾಗಿ, ದೃಕ್ಕಿಂಗೆ ತೋರುವುದೆಲ್ಲವೂ ಲಿಂಗಮಯವಾಗಿ, ಏನ ಮುಟ್ಟಿ ಹಿಡಿದಡೆಯೂ ಪುಷ್ಪಮಯವಾಗಿ, ಜಿಹ್ವೆಯಲ್ಲಿ ತೋರುವ ಅಪ್ಪುರಸ ಮುಂತಾದುವೆಲ್ಲವು ಅರ್ಪಿತಮಯವಾಗಿ, ಇಂತಪ್ಪ ವ್ಯವಧಾನ ಸರ್ವಾಂಗಲಿಂಗಿಯ ಅವಧಾನ. ಇಷ್ಟದ ಅರಿವೆಂದು ಉಭಯದ ಗುಟ್ಟು ಕೆಟ್ಟಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನೆಂಬುದಕ್ಕೆ ಇದಿರೆಡೆಯಿಲ್ಲ.