ಅನಾದಿಯ ಭ್ರೂಮಧ್ಯದಲ್ಲಿ ಐದು
ಕುದುರೆಯ ಕಟ್ಟಿದ ಕಂಬ ಮುರಿಯಿತ್ತು!
ಎಂಟಾನೆ ಬಿಟ್ಟೋಡಿದವು!
ಹದಿನಾರು ಪ್ರಜೆ ಬೊಬ್ಬಿಡುತಿರ್ದರು.
ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ
ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು.
Hindi Translationअनादि के भ्रूमध्य में
पाँच घोडे बाँधा खूंटा टूटा ।
आठ हाथी छोड भाग गये ।
सोलह प्रजा शोर मचाते रहे ।
शतपत्र कमल कर्णिका मध्य में
गुहेश्वर लिंग शब्द मुग्ध हुआ था ।
Translated by: Eswara Sharma M and Govindarao B N
English Translation
Tamil Translationஅநாதியின் புருவத்தின் நடுவிலே, ஐந்து
குதிரைகளைக் கட்டிய கம்பம் முறிந்தது
எட்டு யானைகள் விட்டு ஓடின
பதினாறு மனிதர்கள் அலறிக் கொண்டிருந்தனர்
ஆயிரம் இதழ்த் தாமரையிலே பிரம்மரந்திரத்திலே
குஹேசுவரலிங்கம் பேரமைதியுடன் விளங்கினன்
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅನಾದಿ = ಆದಿ ರಹಿತ, ಮಹೇಶ್ವರ, ಆತನ ನಾದರೂಪವಾದ ಪ್ರಣವ; ಎಂಟು ಆನೆ = ಎಂಟು ಮದಗಳು; ಐದು ಕುದುರೆಗಳು = ಬಲವಂತವಾಗಿ ವಿಚಯಗಳತ್ತ ಹರಿಯುವ ಪಂಚ ಇಂದ್ರಿಯ ವೃತ್ತಿಗಳು; ಕಂಭ = ಶುದ್ಧವಾದ ಮನಸ್ಸು; ಕರ್ಣಿಕೆ = ಬ್ರಹ್ಮರಂಧ್ರ; ಭ್ರೂಮಧ್ಯ = ತ್ರಿಕೂಟ; ಮುರಿ = ಉನ್ಮನವಾಗು, ಅಮನವಾಗು; ಶತಪತ್ರ ಕಮಲ = ಸಹಸ್ರಾರ ಕಮಲ; ಹದಿನಾರು ಪ್ರಜೆಗಳು = ಹದಿನಾರು ಬಗೆಯ ಅಹಂ ವೃತ್ತಿಗಳು; Written by: Sri Siddeswara Swamiji, Vijayapura