•  
  •  
  •  
  •  
Index   ವಚನ - 292    Search  
 
ಉದಕದೊಳಗೆ ಕಿಚ್ಚು ಹುಟ್ಟಿ ಸುಡುತ್ತಿರ್ದುದ ಕಂಡೆ, ನೋಡಾ! ಗಗನದ ಮೇಲೆ ಮಾಮರನ ಕಂಡೆ, ನೋಡಾ! ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ [ಕಂಡೆ] ನೋಡಾ ಗುಹೇಶ್ವರಾ.
Transliteration Udakadoḷage kiccu huṭṭi suḍuttirduda kaṇḍe, nōḍā! Gaganada mēle māmarana kaṇḍe, nōḍā! Pakkavillada hakki bayala nuṅgitta [kaṇḍe] nōḍā guhēśvarā.
Hindi Translation उदक में अग्नि पैदा होकर जलते देखा । गगन पर मामर देखा। बिना पंखवाला पक्षि शून्य निगला देखा गुहेश्वरा । Translated by: Eswara Sharma M and Govindarao B N
Tamil Translation நீரிலே அழல் தோன்றி சுட்டதைக் கண்டேன் ஆகாயத்தின் மீது மாமரத்தைக் கண்டேன் நான் எனும் உணர்வற்ற பறவை வயலை விழுங்கியதைக் கண்டேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಉದಕ = ಮನಸ್ಸು; ಕಿಚ್ಚು = ಶಿವಜ್ಞಾನ; ಗಗನ = ಗಗನ ಚಕ್ರ, ಬ್ರಹ್ಮ ಮಂಡಲ; ನುಂಗು = ಒಂದಾಗಿಸಿಕೊ, ಒಂದುಗೂಡು; ಪಕ್ಕ = ಅಹಂ ಮತ್ತು ಮಮಭಾವ, ನಾನು ಮತ್ತು ನನ್ನದು ಎಂಬ ಭಾವ; ಬಯಲು = ನಿಃಕಲ ಲಿಂಗ, ಗಗನಮಂಡಲದೊಳಗಿರುವ ಚಿದಾಕಾಶ; ಮಾಮರ = ಪರಮಾನಂದ; ಹಕ್ಕಿ = ಜೀವಹಂಸ, ಯೋಗಿ; Written by: Sri Siddeswara Swamiji, Vijayapura