•  
  •  
  •  
  •  
Index   ವಚನ - 293    Search  
 
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ! ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ? ಗಗನದ ವಾಯುವ ಬೆಂಬಳಿವಿಡಿದು, ಅಗ್ನಿಯಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ! ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ, ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು.
Transliteration Mr̥gada san̄cada taleyalli jagada bayala nālage! Aghaharana dr̥ṣṭiyalli bobbeyabbaravidēno? Gaganada vāyuva bembaḷiviḍidu, agni appina kaḷeyalli mēdini aḍagittu nōḍā! Manada bageyanavagrahisi, jagada baṇṇava nuṅgi, guhēśvaranemba liṅgadalli nirāḷavāyittu.
Hindi Translation मृग रहस्य सिर में जग की शून्य जीभ ! अघहर की दृष्टी में शोर मचाना क्या है ? गगन वायु पीछा करके , अग्नि-जल की मित्रता में मेदिनी समा गयी थी देखो ! मन की रीति पकडकर जगत का रंग निगलकर, गुहेश्वर लिंग में निराला हुआ था । Translated by: Eswara Sharma M and Govindarao B N
Tamil Translation மறைஞான மரும்பியமான், உலகியலின் மருளடங்கி அமுதத்தைச் சுவைத்தவாறு வயலான நிலை பிரம்ம மண்டலத்தில் சிவனைக் கண்டு, அவன் செவிமடுக்கும் நாதம் எதுவோ? ஆகாயத்தில் வாயுவை அனுசரித்து, உடலடங்கியது மனத்தின் செயல்பாடுகளை நிறுத்தி, உலகம் மறைய குஹேசுவனெனும் இலிங்கத்தில் ஒன்றியது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಘಹರ = ಆ ಊರ್ಧ್ವಮಂಡಲದೊಳಗೆ ಅನುಭವಕ್ಕೆ ಬರುವ ಶಿವ; ಅವಗ್ರಹಿಸು = ಹಿಡಿದಿಡು, ಅಡಗಿಸು, ನಿಲ್ಲಿಸು; ಗಗನ = ಬ್ರಹ್ಮರಂಧ್ರ; ಜಗದ ಬಣ್ಣ = ಜಗತ್ತಿನ ತೋರಿಕೆ; ಜಗದ ಬಯಲು = ಜಗದ್ಭ್ರಮೆ ಹಾಗೂ ಜಗತ್ ಮೋಹಗಳು ಬಯಲಾಗಿರುವುದು; ದೃಷ್ಟಿಯಲ್ಲಿ = ಸಾಕ್ಷಿತ್ವದಲ್ಲಿ, ಸಾನ್ನಿಧ್ಯದಲ್ಲಿ ; ನಾಲಗೆ = ಅಮೃತದ ಸವಿ; ನಿರಾಳವಾಯಿತ್ತು = ಬಯಲ ಬೆರೆದು ಬಯಲಾಯಿತ್ತು; ನುಂಗಿ = ಇಲ್ಲದಾಗಿಸಿ; ಬೆಂಬಳಿವಿಡಿದು = ಅನುಸರಿಸಿ; ಬೊಬ್ಬೆಯಬ್ಬರ = ಘನಗಂಭೀರ ಓಂಕಾರ, ಪ್ರಣವನಾದ; ಮನದ ಬಗೆ = ಮನದೊಳಗೆ ಉಂಟಾಗುವ ವೃತ್ತಿ ಸಮೂಹ; ಮೃಗ = ಜೀವಾತ್ಮ; ಮೇದಿನಿ = ಅಗ್ನಿ, ಅಪ್ಪು ಮುಂತಾದ ಪಂಚಭೂತಗಳ ಗುಣಧರ್ಮವೆಂಬ ಕಳೆಯಲ್ಲಿ ರೂಪಗೊಂಡ ದೇಹ; ವಾಯು = ಪ್ರಾಣ; ಸಂಚದ ತಲೆ = ಪರಮರಹಸ್ಯಜ್ಞಾನ, ಬ್ರಹ್ಮ ಪ್ರಜ್ಞೆ; Written by: Sri Siddeswara Swamiji, Vijayapura