•  
  •  
  •  
  •  
Index   ವಚನ - 295    Search  
 
ಮನದ ಕಾಲತ್ತಲು ತನುವಿನ ಕಾಲಿತ್ತಲು. ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು. ಲಿಂಗ ಮುಖದಲಾದ ಸೂಚನೆಯ ಸುಖವ ಕಂಡು ಗಮನ ಕೆಟ್ಟಿತ್ತು. ಅನುವಾಯಿತ್ತು ಅನುವಾಯಿತ್ತು, ಅಲ್ಲಿಯೆ ತಲ್ಲೀನವಾಯಿತ್ತು- ಗುಹೇಶ್ವರನೆಂಬ ಲಿಂಗೈಕ್ಯಂಗೆ.
Transliteration Manada kālattalu tanuvina kālittalu. Anubhāvada anuvanu nenevutta nenevutta gamana keṭṭittu. Liṅga mukhadalāda sūcaneya sukhava kaṇḍu gamana keṭṭittu. Anuvāyittu anuvāyittu, alliye tallīnavāyittu- guhēśvaranemba liṅgaikyaṅge.
Music Courtesy:
Hindi Translation मन का पैर उधर ,तन का पैर इधर , अनुभाव का ज्ञान याद करते ध्यान बिगडा था । लिंगमुख में हुए सूचना- सुख देख ध्यान बिगडा था । सहायक हुआ था, सहायक हुआ था। वहीं तल्लीन हुआ था, गुहेश्वर जैसे लिंगैक्य को । Translated by: Eswara Sharma M and Govindarao B N
Tamil Translation மனம் அங்கு செல்கிறது. உடல் இங்கு செல்கிறது இலிங்கானுபவத்தை எண்ணிஎண்ணி மனம்நிலை கொள்கிறது இலிங்கத்தையுணர்ந்த இன்பத்தால் மனம் அமைதியுற குஹேசுவரலிங்கத்தில் ஒன்றியவனுக்கு மனமும் அங்கு ஒன்றியது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನುಭಾವದ ಅನು = ಲಿಂಗಾನು ಭಾವದ ವೈಭವ; ಅನುವಾಗು = ಲಭ್ಯವಾಗು; ಗಮನಗೆಡು = ನಿರ್ಗಮನಿಯಾಗು; ತನುವಿನ ಕಾಲಿತ್ತಲು = ತನುವಿನ ಹೆಜ್ಜೆ ಇತ್ತ; ಪ್ರಕೃತಿಮಂಡಲದತ್ತ; ತಲ್ಲೀಯವಾಗು = ಸಮರಸಗೊಳ್ಳು; ಮನದ ಕಾಲತ್ತಲು = ಮನದ ಹೆಜ್ಜೆ ಅತ್ತ; ಶಿವನ ನೆಲೆಯತ್ತ; Written by: Sri Siddeswara Swamiji, Vijayapura