•  
  •  
  •  
  •  
Index   ವಚನ - 296    Search  
 
ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ! ಬಯಲ ಸಿಡಿಲು ಹೊಯ್ದಡೆ ಹಿಂದೆ ಹೆಣನ ಸುಡುವರಿಲ್ಲ ಗುಹೇಶ್ವರಾ.
Transliteration Parimaḷaviddu gamanāgamanavillavidēno! Bayala siḍilu hoydaḍe hinde heṇana suḍuvarilla guhēśvarā.
Hindi Translation परिमल रहकर गमनागमन नहीं , यह क्या ? शून्य नामक बिजली गिरी तो पीछे लाश जलानेवाला नहीं गुहेश्वरा । Translated by: Eswara Sharma M and Govindarao B N
Tamil Translation நறுமணமுளது, அகல்வது, வருவது இல்லை. இது என்னவோ? வயல் என்னும் மின்னல் தாக்கின் பிறகு பிணத்தை எரிப்போரில்லை குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಗಮನಾಗಮನ = ಹೋಗುವಿಕೆ-ಬರುವಿಕೆ; ಮರಣ-ಜನ್ಮಗಳು; ಪರಿಮಳ = ಲಿಂಗಾಂಗ ಸಮರಸ ಸುಖ; ಬಯಲ ಸಿಡಿಲು = ಬಯಲೆಂಬ ಸಿಡಿಲು; ಬಯಲು = ಆತ್ಮ, ಪರಮ ಆತ್ಮ, ಆ ಪರಮ ಆತ್ಮನ ದಿವ್ಯ ಜ್ಞಾನ, ಅದು ಸಿಡಿಲಿನಂತಿದೆ; ಹಿಂದೆ ಹೆಣವ ಸುಡುವರಿ = ಸಿಡಿಲು ಹೊಯ್ದಾಗ ಹೆಣವೇ ಉಳಿಯದಾಗಿ ಸುಡುವವರು ಇನ್ನೆಲ್ಲಿ? ಸುಡುವುದು ಇನ್ನೇನನ್ನು?; ಹೊಯ್ದಡೆ = ಹೊಡೆದರೆ; Written by: Sri Siddeswara Swamiji, Vijayapura