ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ ಪುಷ್ಪ ಹುಟ್ಟಿ,
ರೂಹಿಲ್ಲದ ಅನಲನು ಅವಗ್ರಹಿಸಿತ್ತು ನೋಡಾ!
ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿ ಹುಟ್ಟಿತ್ತು ನೋಡಾ!
ಅತ್ತಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತ್ತಲ್ಲಾ!
ನಿತ್ಯಾನಂದಪರಿಪೂರ್ಣದ ನಿಲವಿನ,
ಅಮೃತಬಿಂದುವಿನ ರಸವ ದಣಿಯುಂಡು,
ಪಶ್ಚಿಮದಲ್ಲಿ ಗುಹೇಶ್ವರಲಿಂಗವ ಸ್ವೀಕರಿಸಿತ್ತಲ್ಲಾ.
Transliteration Bērillada giḍuviṅge parimaḷavillada puṣpa huṭṭi,
rūhillada analanu avagrahisittu nōḍā!
Vr̥kṣavillada daḷadalli ondu pakṣi huṭṭittu nōḍā!
Attalittalu kāṇade nettiya nayanadalli nōḍittallā!
Nityānandaparipūrṇada nilavina,
amr̥tabinduvina rasava daṇiyuṇḍu,
paścimadalli guhēśvaraliṅgava svīkarisittallā.
Hindi Translation बिना जड पौधे में परिमल रहित पुष्प पैदा होकर ,
बिना रुह अनल पकडा देखो ।
बिना वृक्ष के दल में एक पक्षि पैदा हुआ था देखो।
कहीं कहीं बिना देखे मस्तक पर के नयन से देखा ।
नित्यानंद परिपूर्ण स्थिति में
अमृत बिंदु रस मन भर खाकर
पश्चिम में गुहेश्वर लिंग को स्वीकार किया था।
Translated by: Eswara Sharma M and Govindarao B N
Tamil Translation வேரற்ற செடியிலே நறுமணமற்ற மலர் மலர்ந்து
உருவமற்ற ஜீவனைச் சூழ்ந்தது காணாய்
மரமற்ற தளத்தில் ஒரு பறவை தோன்றியது காணாய்!
அங்குமிங்கும் நோக்காது நெற்றிக் கண்ணை நோக்கியது
முழுமையான பேரின்ப நிலையின்
அமுத பிந்துவின் சாற்றைத் தணியப்பருகி
பிரம்மரந்திரத்தில் குஹேசுவரலிங்கத்தைத் துய்க்கிறானன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಮೃತಬಿಂದು = ಓಂಕಾರ ಪ್ರಣವಸ್ವರೂಪನಾದ ಶಿವ; ಅಲ್ಲಲ್ಲಿ ಕಾಣದೆ = ಬೇರೆಡೆ ಎಲ್ಲಿಯೂ ದೃಷ್ಟಿ ಹರಿಸದೆ ಅಥವಾ ಬೇರೆಲ್ಲಿಯೂ ಶಿವನ ನಿಲುವನ್ನು ಕಾಣದೆ.; ಅವಗ್ರಹಿಸು = ಆವರಿಸು; ಆನಂದ = ನಿರತಿಶಯ ಸುಖರೂಪ; ನಿತ್ಯ = ಶಾಶ್ವತ.; ನಿಲವು = ಸ್ವರೂಪ; ನೆತ್ತಿಯ ನಯನದಲ್ಲಿ = ಊರ್ಧ್ವದೃಷ್ಟಿಯಲ್ಲಿ; ಪಕ್ಷಿ = ಹಂಸ; ಪರಿಪೂರ್ಣ = ನಿಸ್ಸೀಮ.; ಪರಿಮಳವಿಲ್ಲದ ಪುಷ್ಪ = ವಿಷಯವಾಸನೆಗಳಿಲ್ಲದ ಮನಸ್ಸು; ಪಶ್ಚಿಮ = ಬ್ರಹ್ಮರಂಧ್ರ.; ಬೇರಿಲ್ಲದ ಗಿಡ = ಸ್ಥಿರವಿಲ್ಲದ ದೇಹ; ರಸ = ಆನಂದರಸ; ರೂಹಿಲ್ಲದ ಅನಲ = ರೂಹಿಲ್ಲದವ ಶಿವ, ಆತ್ಮ; ಆ ಶಿವನ ಜ್ಞಾನ, ಆತ್ಮ ಜ್ಞಾನ; ವೃಕ್ಷವಿಲ್ಲದ ದಳ = ದೇಹವೃಕ್ಷದ ಭಾವ ಮರೆಯಾಗದ ಕಾಣಬರುವ ತ್ರಿಕೂಟ; ಅದು ಎರಡು ದಳಗಳ ಚಕ್ರ; ಆಜ್ಞಾ ಎಂಬುದು ಅದರ ಇನ್ನೊಂದು ಹೆಸರು;
Written by: Sri Siddeswara Swamiji, Vijayapura