Index   ವಚನ - 13    Search  
 
ಅದನದನತಿಗಳೆದನೆ ಯೋಗಿ, ಇಹ ಪರವನೆ ಮೀರಿ ನಿಲಬಲ್ಲಾತನೆ ಯೋಗಿ. `ತತ್ತ್ವಮಸಿ' ವಾಕ್ಯವು ನಿಲುಕದ ಪದವ ಮೀರಿ ನಿಲಬಲ್ಲಾತನೆ ಯೋಗಿ ಇದು ತುದಿಪದವು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.