Index   ವಚನ - 20    Search  
 
ಅಮೃತಸೇವನೆಯಾದ ಬಳಿಕ ಭಿನ್ನರುಚಿಯ ನಿಶ್ಚಯಿಸಲುಂಟೆ? ಸತ್ಯಶಾಂತಿಜ್ಞಾನವಿಂಬುಗೊಂಡ ಮಹಾಪುರುಷಂಗೆ ಸುಖದ ಪದವ ನಿಶ್ಚಯಿಸಲುಂಟೆ? ಸದ್ಗುರುಕಾರುಣ್ಯವ ಪಡೆದ ಮಹಾಭಕ್ತಂಗೆ ಮುಕ್ತಿಯ ನಿಶ್ಚಯಿಸಲುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.