`ಆತ್ಮಾsಹಂ' ಎಂಬರು ತಾವು ಆತ್ಮವಿತ್ತುಗಳೆಲ್ಲ.
ಆತ್ಮನಂಥವನಿಂಥವನೆಂದು ಕಂಡವರುಂಟೆ ಅಯ್ಯ?
`ಆತ್ಮಜ್ಞಾತಾsಹಂ' ಎಂಬ ಶ್ರುತಿಪ್ರಮಾಣವುಂಟೆ ಅಯ್ಯ?
ಆತ್ಮ ವಾಙ್ಮನಕ್ಕಗೋಚರನಯ್ಯಾ,
ಆತ್ಮ `ತತ್ತ್ವಮಸಿ' ಎಂಬ ವಾಕ್ಯದಿಂದತ್ತತ್ತಲಯ್ಯಾ.
ಆತ್ಮನ ಕಂಡಿಹೆನೆಂಬ ಅರೆಮರುಳೆ ಕೇಳಾ,
ಆತ್ಮನು ತಾನಾದ ವಸ್ತು,
ನೀರು ನೀರ ಕೂಡಿದಂತೆ, ಇಹ ಸಹಜಾತ್ಮನ ಕಾಬಡೆ
ಕಾಯವಿಡಿದು ಕಾಣಬಹುದೆ ಅಯ್ಯಾ?
ಓಂ ಆತ್ಮನು ಪ್ರಾಣೇಶಲಿಂಗ, ಪ್ರಸಾದಕಾಯವೆಂದರಿದಾತನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Ātmāshaṁ' embaru tāvu ātmavittugaḷella.
Ātmananthavaninthavanendu kaṇḍavaruṇṭe ayya?
`Ātmajñātāshaṁ' emba śrutipramāṇavuṇṭe ayya?
Ātma vāṅmanakkagōcaranayyā,
ātma `tattvamasi' emba vākyadindattattalayyā.
Ātmana kaṇḍ'̔ihenemba aremaruḷe kēḷā,
ātmanu tānāda vastu,
nīru nīra kūḍidante, iha sahajātmana kābaḍe
kāyaviḍidu kāṇabahude ayyā?
Ōṁ ātmanu prāṇēśaliṅga, prasādakāyavendaridātanu
uriliṅgapeddipriya viśvēśvarā.