Index   ವಚನ - 59    Search  
 
ಈರೇಳು ಭುವನ ಚೌರಾಸಿಲಕ್ಷ ಯೋನಿಮುಖಜೀವರಾಶಿಗಳೊಳಗೆ ಓರಂತೆ ತೊಳಲುತ್ತಿಪ್ಪ ಹಂಸನ ಗತಿಗೆಡಿಸುವ ಪರಮ ಪಶುಪಾಶಪತಿ ಜ್ಞಾನದ ಪದವನರುಹುವ ಗುರುವಿನ ಮಥನವೆ ಗುರುವಿನ ಶೇಷ. ಹೃತ್ಕುಂಡಲದ್ವಾದಶಾಂತತ್ರಿತತ್ವದ ಮೇಲೆ ತನ್ನ ಜೀವವು ಶಾಂತ್ಯತೀತವಾದ ತಾನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಗುರುಭಕ್ತಪ್ರಸಾದಿಯ ಹೊಲಬಿನ ಸಂಗದಿಂದ ಲಿಂಗಸುಸಂಗವೇದ್ಯ.