Index   ವಚನ - 63    Search  
 
ಎನಗೆ ನೀನು ಪ್ರಾಣ, ನಿನಗೆ ನಾನು ಪ್ರಾಣ. ಇನ್ನೇನೋ ಇನ್ನೇನೋ ಹಂಗಿಲ್ಲ, ಹರಿ ಇಲ್ಲ. ಮತ್ತೇನೂ ಪ್ರಪಂಚಿಲ್ಲಾಗಿ, ನೀ ನಡೆಸಿದಂತೆ ನಡೆದೆ, ನೀ ನುಡಿಸಿದಂತೆ ನುಡಿದೆ, ನೀ ನೋಡಿಸಿದಂತೆ ನೋಡಿದೆ, ನೀ ಆಡಿಸಿದಂತೆ ಆಡಿದೆ, ನೀ ಮಾಡಿಸಿದಂತೆ ಮಾಡಿದೆ. ಈ ಸುಖದುಃಖ ಪುಣ್ಯಪಾಪಕ್ಕೆ ಕಾರಣನು ನೀನೇ ಅಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.