Index   ವಚನ - 67    Search  
 
ಎನ್ನ ಗತಿ, ನಿನ್ನ ಗತಿ ಎನ್ನ ಕೇಳಿಕೆ, ನಿನ್ನ ಕೇಳಿಕೆ ಎನ್ನ ನೋಟವೆ, ನಿನ್ನ ನೋಟ. ಎನ್ನಂಗ ಸ್ಪರ್ಶನವೇ, ನಿನ್ನಂಗ ಸ್ಪರ್ಶನ ಎನ್ನಂಗ ಸುಖಭೋಗವೇ, ನಿನ್ನಂಗ ಸುಖಭೋಗ. ನನ್ನೊಳಗೆ ನೀನು, ನಿನ್ನೊಳಗೆ ನಾನು. ಎನ್ನ ಪ್ರಾಣ ನೀನು, ನಿನ್ನ ಪ್ರಾಣ ನಾನಾದ ಕಾರಣ ಎನ್ನ ಸೋಂಕಿತ್ತೆಲ್ಲ ನಿನ್ನ ಪೂಜೆಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.