Index   ವಚನ - 73    Search  
 
ಎರಡ ನುಡಿದ ವಿಷ್ಣುವೇನಾದ? ಎರಡ ನುಡಿದ ಬ್ರಹ್ಮನೇನಾದ? ಎರಡ ನುಡಿದ ಇಂದ್ರನೇನಾದ? ಎರಡ ನುಡಿದ ದಕ್ಷನೇನಾದ? ಎರಡ ನುಡಿದ ವ್ಯಾಸನೇನಾದನೆಂದು, ಇವರುಗಳು ನುಡಿದ ಪರಿಯನೂ, ಅವರ ಪರಿಯನೂ ವಿಚಾರಿಸಿ ನೋಡಿದಡೆ, ಶಿವನೇ ಕರ್ತನೆಂದು ನುಡಿದು, ಮರಳಿ `ಅಹಂ ಕರ್ತಾ' ಎಂದು ನುಡಿದು ಶಾಸ್ತಿಗೊಳಗಾದರು, ಮಾನಹಾನಿಯಾದರು ನೋಡಿರೇ. ವಿಶ್ವವೆಲ್ಲವೂ ಪಶು, ಶಿವನೊಬ್ಬನೇ ಪತಿ ಸರ್ವವೆಲ್ಲವೂ ಶಕ್ತಿರೂಪು, ಶಿವನೊಬ್ಬನೇ ಪುರುಷನು ಎಂದರಿದು ಸರ್ವರೂ ಭೃತ್ಯರು, ಶಿವನೊಬ್ಬನೇ ಕರ್ತನೆಂದರಿದು ಮನ ವಚನ ಒಂದಾಗಿ ನೆನೆವುತ್ತಿಪ್ಪವರು ಶಿವನೊಂದಾದರಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ದೇವನೊಬ್ಬನೆ, ಎರಡಲ್ಲ.