•  
  •  
  •  
  •  
Index   ವಚನ - 304    Search  
 
ನೆನೆನೆನೆ ಎಂದಡೆ ನಾನೇನ ನೆನೆವೆನಯ್ಯಾ? ಎನ್ನ ಕಾಯವೆ ಕೈಲಾಸವಾಯಿತ್ತು, ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು. ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ? ಗುಹೇಶ್ವರಲಿಂಗ ಲೀಯವಾಯಿತ್ತು.
Transliteration Nenenene endaḍe nānēna nenevenayyā? Enna kāyave kailāsavāyittu, manave liṅgavāyittu, tanuve sejjeyāyittu. Nenevaḍe dēvanuṇṭe? Nōḍuvaḍe bhaktanuṇṭe? Guhēśvaraliṅga līyavāyittu.
Hindi Translation ध्यान ध्यान करो कहें तो क्या ध्यान करूँ? मेरा शरीर ही कैलास हुआ था, मन ही लिंग हुआ था, तनु ही शय्या हुई थी । ध्यान करे तो क्या देव है ? देखे तो क्या भक्त है ? गुहेश्वर लिंग लीन हुआ था। Translated by: Eswara Sharma M and Govindarao B N
Tamil Translation நினை நினை எனின் எதை நினைப்பேன் ஐயனே? என் உடலே கைலாசமாயிற்று மனமே இலிங்கமாயிற்று, உடலே கோயிலாயிற்று. நினைக்க இறைஉண்டோ? காணின் பக்தருண்டோ? குஹேசுவரலிங்கம் ஒருமித்ததன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಯ = ಸ್ಥೂಲಕಾಯ; ಕೈಲಾಸ = ಶಿವಸ್ಥಾನ; ತನು = ಹೃದಯ; ಮನ = ಅರಿವ ಮನ; ಸೆಜ್ಜೆ = ಶಿವನಿಲಯ; Written by: Sri Siddeswara Swamiji, Vijayapura