ಓಂ ನಮಃ ಶಿವಾಯ ಎಂಬುದೆ ಆಚಾರಲಿಂಗ,
ಓಂ ನಮಃ ಶಿವಾಯ ಎಂಬುದೆ ಗುರುಲಿಂಗ,
ಓಂ ನಮಃ ಶಿವಾಯ ಎಂಬುದೆ ಶಿವಲಿಂಗ,
ಓಂ ನಮಃ ಶಿವಾಯ ಎಂಬುದೆ ಚರಲಿಂಗ,
ಓಂ ನಮಃ ಶಿವಾಯ ಎಂಬುದೆ ಪ್ರಸಾದಲಿಂಗ,
ಓಂ ನಮಃ ಶಿವಾಯ ಎಂಬುದೆ ಮಹಾಲಿಂಗ.
ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನಲು
ಪರಶಿವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.