ಗುರುಲಿಂಗಜಂಗಮವೆ ಶಿವನೆಂದು
ಅರಿದು ಮರೆವನು ಶಿವಭಕ್ತನೆ? ಅಲ್ಲ,
ಶಿವಭಕ್ತನು ಅರಿದ ಬಳಿಕ ಮರೆಯನು.
ಅರಿದು ಮರೆವನು ಮದ್ದುಕುಣಿಕೆಯ ಕಾಯ ಮೆದ್ದವನು,
ಮದ್ಯ ಮಾಂಸವ ಸೇವಿಸಿದವನು,
ಅರಿದು ಮರೆವವನು ಅಜ್ಞಾನಿಗಳ ಸಂಗವ ಮಾಡಿದವನು,
ಶ್ವಾನನ ಮಿತ್ರನು.
ಅವಂದಿರುಗಳಿಗೆ ಅರಿವು ಮರವೆ ಸಹಜವಾದ ಕಾರಣ
ಅರಿದು ಮರೆವವನಲ್ಲ ಶಿವಭಕ್ತನು,
ಮರೆದು ಅರಿವವನಲ್ಲ ಶಿವಭಕ್ತನು,
ನಂಬಿದವನಲ್ಲ ಶಿವಭಕ್ತನು, ನಂಬಿ ಕೆಡದವನಲ್ಲ ಶಿವಭಕ್ತನು,
ವಿಶ್ವಾಸವ ಮಾಡುವವನಲ್ಲ ಶಿವಭಕ್ತನು
ಅವಿಶ್ವಾಸ ಮಾಡುವವನಲ್ಲ ಶಿವಭಕ್ತನು.
ಮರೆದಡೆಯು ಮರೆದವನಂತೆ,
ಅರಿದಡೆಯು ಶಿವನಂತೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Guruliṅgajaṅgamave śivanendu
aridu marevanu śivabhaktane? Alla,
śivabhaktanu arida baḷika mareyanu.
Aridu marevanu maddukuṇikeya kāya meddavanu,
madya mānsava sēvisidavanu,
aridu marevavanu ajñānigaḷa saṅgava māḍidavanu,
śvānana mitranu.
Avandirugaḷige arivu marave sahajavāda kāraṇa
aridu marevavanalla śivabhaktanu,
maredu arivavanalla śivabhaktanu,
nambidavanalla śivabhaktanu, nambi keḍadavanalla śivabhaktanu,
viśvāsava māḍuvavanalla śivabhaktanu
aviśvāsa māḍuvavanalla śivabhaktanu.
Maredaḍeyu maredavanante,
aridaḍeyu śivanante
uriliṅgapeddipriya viśvēśvarā.