Index   ವಚನ - 135    Search  
 
ತನು ಮನ ಶುದ್ಧವಾದಡೆ ಸ್ವಲ್ಪದ್ರವ್ಯ ಘನತರವಾಯಿತ್ತು ನೋಡಿರೆ, ಮೋಳಿಗೆಯ ಮಾರತಂದೆಗೆ, ನುಲಿಯ ಚಂದಯ್ಯಂಗೆ ಆಯ್ದಕ್ಕಿಯ ಮಾರಣ್ಣಗಳಿಗೆ. ತನು ಮನ ಶುದ್ಧವಲ್ಲದಡೆ ಬಹಳತರ ಮಹದೈಶ್ವರ್ಯ ಸ್ವಲ್ಪವಾಗಿ ಕರಗಿ ಕೆಟ್ಟು ಹೋಗದೆ ರಾವಣಂಗೆ? ಇಂಗಿ ಹೋಗದೆ ದಕ್ಷಂಗೆ? ಉರಿದು ಉರಿದು ಹೋಗದೆ ತ್ರಿಪುರದಾನವರಿಗೆ? ಇದನರಿತು ತನು ಮನ ಶುದ್ಧವಾಗಲು ತೃಣ ಮಹಾಮೇರುಪರ್ವತವಪ್ಪುದಯ್ಯಾ. ಇಹದಲೂ ಮಹಾಗ್ರಾಸ, ಪರದಲೂ ಮಹಾಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.