Index   ವಚನ - 142    Search  
 
ದೇವ, ಮಂಗಳಮಜ್ಜನಮಂ ಮಾಡಲು, ಶಿವಲಿಂಗೋದಕದಿಂ ಪಾದಾರ್ಚನೆಯಂ ಮಾಡಿ, ಹೊಂಗಳಸದೊಳಗಘ್ರ್ಯಂಗಳಂ ತುಂಬಿ ಮಧುಪರ್ಕಮಂ ಮಾಡಿ, ದೇವಾಂಗವಸ್ತ್ರಂಗಳನುಡಿಸಿ ಷೋಡಶಾಭರಣಂಗಳಂ ತೊಡಿಸಿ, ದೇವಂಗೆ ಗಂಧಾಕ್ಷತೆ ಪುಷ್ಪಂಗಳಿಂ ಪೂಜೆಯ ಮಾಡಿ, ಅಗರು ಧೂಪಂಗಳಿಂ ಧೂಪಿಸಿ, ಮಂಗಳಾಚರಣೆ ಆರೋಗಣೆ ವೀಳ್ಯೆಯವನಳವಡಿಸಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಂಗೆ, ಗೀತವಾದ್ಯನೃತ್ಯವನಾಡಿ ಮೆಚ್ಚಿಸುವ ಗಣಂಗಳಿಗೆ ನಮೋ ನಮೋ ಎಂಬೆನು.