ನೀರ ನಡುವೆ ಒಂದು ಗಿಡು ಹುಟ್ಟಿತ್ತು.
ಆ ಗಿಡುವಿನ ಎಲೆಯ ಮೆಲಬಂದಿತ್ತೊಂದು ಕೋಡಗ.
ಆ ಕೋಡಗದ ಕೊಂಬಿನಲ್ಲಿ ಮೂಡಿತ್ತು ಅದ್ಭುತ.
ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರಾ.
Transliteration Nīra naḍuve ondu giḍu huṭṭittu.
Ā giḍuvina eleya melabandittondu kōḍaga.
Ā kōḍagada kombinalli mūḍittu adbhuta.
Ā adbhutavaḷidallade śaraṇanāgabāradu guhēśvarā.
Hindi Translation पानी के बीच एक पौधा पैदा हुआ था।
उस पौधे के पत्ते खाने एक वानर आया।
उस वानर के सींग पर अद्भुत उगा,
वह अद्भुत नाश हुए बिना शरण नहीं होना है गुहेश्वरा।
Translated by: Eswara Sharma M and Govindarao B N
Tamil Translation நீரின் நடுவில் ஒரு செடி தோன்றியது.
ஒரு குரங்கு அச்செடியின் இலையை
மெல்ல வந்தது. குரங்கின் கொம்பிலே
அற்புதம் நிகழ்ந்தது. அந்த அற்புதம்
மறைந்தாலன்றி சரணனாக வியலுமோ குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೋಡಗ = ಮನಸ್ಸು; ಗಿಡು = ಆ ಪಂಚಭೂತಗಳಿಂದ ನಿರ್ಮಾಣಗೊಂಡ ದೇಹ; ಗಿಡುವಿನ ಎಲೆಗಳು = ದೇಹದ ಇಂದ್ರಿಯಗಳಲ್ಲಿ ಮೂಡಿಬರುವ ಶಬ್ದಾದಿ ವಿಷಯಗಳು; ನೀರು = ಪಂಚಭೂತಗಳ ದರ್ಶಕ;
Written by: Sri Siddeswara Swamiji, Vijayapura