•  
  •  
  •  
  •  
Index   ವಚನ - 312    Search  
 
ಹಿಂದನರಿಯದದು ಮುಂದನೇನ ಬಲ್ಲುದೊ? ಉದಯ ಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕಳಿದರಲ್ಲಾ! ಅಂದಂದಿನ ಘಟಜೀವಂಗಳೆಲ್ಲಾ. ಬಂದ ಬಟ್ಟೆಗೆ ಹೋದರಲ್ಲಾ. ಗುಹೇಶ್ವರನೆಂಬ ಲಿಂಗವು ಆರಿಗೂ ಇಲ್ಲವಯ್ಯಾ.
Transliteration Hindanariyadadu mundanēna balludo? Udaya mukhadalli huṭṭida prāṇigaḷu astamānakkaḷidarallā! Andandina ghaṭajīvaṅgaḷellā. Banda baṭṭege hōdarallā. Guhēśvaranemba liṅgavu ārigū illavayyā.
Music Courtesy:
Hindi Translation पिछले नहीं जानते, आगे क्या जानते? उदय मुख में जन में जीव अस्तमान में नाशहुए। उस उस दिन के घट जीवी आये रास्ते पर चले। गुहेश्वर लिंग किसी को नहीं। Translated by: Eswara Sharma M and Govindarao B N
Tamil Translation கடந்ததை அறியாது, வரவிருப்பதை அறியவியலுமோ? உதயத்தில் பிறந்தோர் அத்தமனத்தில் அழிந்தனரன்றோ! காலங்காலமாக உடல்பற்றுடையோர் வந்த வழியிலேயே சென்றனரன்றோ குஹேசுவரலிங்கானுபவம் அத்தகையோருக்கு இல்லை ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರಿಗೂ = ಆ ಘಟಜೀವಿಗಳಾದ ಅವರಾರಿಗೂ; ಇಲ್ಲವಯ್ಯ = ಲಿಂಗಾನುಭವವಿಲ್ಲ.; ಬಟ್ಟೆ = ದಾರಿ; ಮುಂದನು = ಮುಂದಿನದನ್ನು; ಮುಂದಿನದು = ಭಕ್ತಿ ಸಾದನೆಯ ಕೊನೆಯಲ್ಲಿ ಸಿದ್ದಿಸುವ ಶಿವಸಮರತಿ, ಶಿವಾನುಭಾವ, ಶಿವಾನಂದ, ಪರಮಸುಖ.; ಹಿಂದನು = ಹಿಂದಿನದನ್ನು; ಹಿಂದಿನದು = ಭಕ್ತಿ ಮಾರ್ಗಕ್ಕೆ ಬರುವ ಮುಂಚಿನ ಸಾಂಸಾರಿಕ ಜೀವನ, ವೈಷಯಿಕ ಬದುಕು.; Written by: Sri Siddeswara Swamiji, Vijayapura