Index   ವಚನ - 177    Search  
 
ಪುತ್ರ ಮಿತ್ರ ಕಳತ್ರಕ್ಕೆ ಸ್ನೇಹಿಸುವಂತೆ ಶ್ರೀಗುರು ಲಿಂಗ ಜಂಗಮಕ್ಕೆ ಸ್ನೇಹಿಸಬೇಕು. ಸ್ನೇಹವೇ ಬಾತೆ ಕಾಣಿರೋ, ಲಿಂಗಕ್ಕೆ ಸ್ನೇಹವೇ ಭಕ್ತಿ ಕಾಣಿರೋ, ಸ್ನೇಹವೇ ಭಕ್ತಿಗೆ ಮೂಲ ಕಾಣಿರೋ, ಕಣ್ಣಪ್ಪ, ಮಾದಾರ ಚೆನ್ನಯ್ಯ, ಚೋಳಿಯಕ್ಕನ ಸ್ನೇಹವ ನೋಡಿ ಭೋ. ಅವರಂತೆ ಸ್ನೇಹವ ಮಾಡಲು ಭಕ್ತಿ ಮುಕ್ತಿ ಪರಿಣಾಮ ಮಹಾಸುಖ. ಆ ಸುಖಸ್ವರೂಪ ತಾನಾಗಿ ಇಪ್ಪನು ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.