Index   ವಚನ - 191    Search  
 
ಬಹಿರಂಗದಲ್ಲಿ ಶಿವಲಿಂಗ, ಅಂತರಂಗದಲ್ಲಿ ಅನ್ಯದೈವ ಬಹಿರಂಗದಲ್ಲಿ ಲಿಂಗಕ್ರೀ, ಅಂತರಂಗದಲ್ಲಿ ಅನ್ಯಕ್ರೀ ಬಹಿರಂಗದಲ್ಲಿ ಭಕ್ತರು, ಅಂತರಂಗದಲ್ಲಿ ಭವಿಗಳು ಇಂತಿವರುಗಳ ಭಕ್ತರೆಂಬೆನೆ? ಎನಬಾರದು, ನಿಮ್ಮ ಪೂಜಿಸಿಹರಾಗಿ ಭಕ್ತರೆಂಬೆನೆ? ಸದಾಚಾರಕ್ಕೆ ಸಲ್ಲರು. ಲಿಂಗವಂತರು ಮೆಚ್ಚರು. ಈ ಉಭಯ ಸಂಕೀರ್ಣವ ನೀನೆ ಬಲ್ಲೆ. ಎನ್ನ ಮನವಿಡಿಯದು, ಎನಗಿನ್ನಾವುದು ಬುದ್ಧಿ ಎಂಬುದ ವಿಚಾರಿಸಿ ಕರುಣಿಸಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.