Index   ವಚನ - 220    Search  
 
ಮಾತಾಪಿತಸಂಯೋಗಸಂಭೂತನಲ್ಲದವನು ಶ್ವೇತ ಪೀತ ಹರಿತ ಕಪೋತ ಮಾಂಜಿಷ್ಠ ಗೌರ ಇಂತು ಷಡುವರ್ಣರಹಿತನಯ್ಯಾ. ಆದಿ ಮಧ್ಯ ಅವಸಾನವೆಂಬುದಿಲ್ಲದವನ ವೇದವೆಂತುಂಟೆಂದು ನಿರೂಪಿಸಲುಬಾರದು ಅಯ್ಯಾ. ಇವರೆಲ್ಲರೊಳಹೊರಗೆ ತಾನಿಲ್ಲದಿಲ್ಲದವನ ನಾ ಬಲ್ಲೆನೆಂಬ ಹಿರಿಯರ ಟಿಪ್ಪಣ ಮಿಕ್ಕುವು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಭಕ್ತಿಗಮ್ಯನು.