Index   ವಚನ - 224    Search  
 
`ಯಥಾ ಬೀಜಂ ತಥಾಂಕುರಂ' ಎಂಬ ವಾಕ್ಯ ತಪ್ಪದು, ಕಲ್ಪವೃಕ್ಷದ ಬೀಜದಿಂದಾದ ಸಸಿ, ಕಲ್ಪವೃಕ್ಷವಪ್ಪುದು ತಪ್ಪದು, ದಿಟದಿಟ ತಪ್ಪದು ನೋಡಾ. ಕಾಮಧೇನುವಿನ ಶಿಶು ಕಾಮಧೇನುವಪ್ಪುದು ತಪ್ಪದು ದಿಟದಿಟ ನೋಡಾ. ಸದ್ಗುರುವಿನಿಂದಾದ ಶಿಷ್ಯನು ಸದ್ಗುರುವಪ್ಪುದು ತಪ್ಪದು ದಿಟದಿಟ ನೋಡಾ. `ಯಥಾ ಬೀಜಂ ತಥಾಂಕುರಂ' ಎಂಬ ವಾಕ್ಯ ತಪ್ಪದು ಶಿವನೇ ಬಲ್ಲನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.