Index   ವಚನ - 236    Search  
 
ಲಿಂಗಪ್ರಸಾದದಲ್ಲಿ ಸುಯಿಧಾನಿಯಾಗದವರಲ್ಲಿ ಜಂಗಮವೆಂದು ಪ್ರಸಾದವ ಕೊಳ್ಳಲಾಗದು. ಅದೇನು ಕಾರಣವೆಂದಡೆ: ತಾನುಂಬುವುದು ಎಂಜಲು, ಪರರಿಗಿಕ್ಕುವುದು ಪ್ರಸಾದವೆ? ಬಿಡು ಬಿಡು, ಸುಡು ಸುಡು, ಈ ಕಷ್ಟದ ನುಡಿಯ ಕೇಳಲಾಗದು. ಪರುಷ ನಿರ್ಮಲವಾದಲ್ಲದೆ, ಅದು ಲೋಹದ ದುರ್ಗುಣವ ಕೆಡಿಸಲರಿಯದು. ಜಂಗಮನಾಗಿಯಲ್ಲದೆ ತಾ ಭಕ್ತನಾಗಲರಿಯ. ಮಡಿಯರ್ಧ, ಮೈಲಿಗೆಯರ್ಧವಾದಡೆ ಕೆಡಹಿ ನಾಯಕ ನರಕದಲ್ಲಿಕ್ಕುದೆ ಬಿಡುವನೆ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?