Index   ವಚನ - 238    Search  
 
ಲಿಂಗಭರಿತ ಶರಣ, ಶರಣಭರಿತ ಲಿಂಗವದೆಂತೆಂದಡೆ: `ಶರಣಮಧ್ಯೇ ತು ಲಿಂಗಂ ಸ್ಯಾತ್ ಲಿಂಗಮಧ್ಯೇ ತು ಶರಣಃ' ಎಂದುದಾಗಿ, ಶರಣ ಬೇರೆಯೆ? ಲಿಂಗ ಬೇರೆಯೆ? ಶಿವ ಶಿವಾ ಒಂದೇ ಕಾಣಿರಣ್ಣಾ. ಶರಣನ ಕ್ರೀ ಎಲ್ಲವೂ ಲಿಂಗಕ್ರೀ,[ಲಿಂಗಕ್ರಿ] ಎಲ್ಲವೂ ಶರಣಕ್ರೀ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.