ಲಿಂಗವಂತನು ಲಿಂಗವಂತಂಗೆ
ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ.
ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ,
ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ,
ಲಿಂಗವೂ ಒಲಿವುದಯ್ಯಾ.
ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ
ನೋವು ಮಾಣದು, ಶಿವನೊಲವು ತಪ್ಪದು.
ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು
ಅವಮಾನವ ಮಾಡಿ ದೋಷಿಗಳಾದರು.
ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ
ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ
ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Liṅgavantanu liṅgavantaṅge
aṇumātra avamānava māḍidaḍe mana nōvudayyā.
Liṅgavantanu śuci satyanu śāntanu liṅgasukhi,
liṅgadalli tanumanadhana berasippudāgi,
liṅgavū olivudayyā.
Baḷika mahāparvatapramāṇa satkārava māḍidarū
nōvu māṇadu, śivanolavu tappadu.
Hinde viṣṇu, brahma, indra, dakṣanu
avamānava māḍi dōṣigaḷādaru.
Idanaridu tanu mana dhanadalli van̄caneyillade
bhayabhaktiyindaridu naḍedu sukhasaṅgatātparya
sahajaviḍidippudayyā, uriliṅgapeddipriya viśvēśvarā.