Index   ವಚನ - 281    Search  
 
ಶರಣರ ಕೂಡೆ ನುಡಿ ದಿಟವಿಲ್ಲ, ಮೇಲೆ ಇನ್ನೇನಾದೀತು? ತನು ಸವೆಯದು, ಮನ ಸವೆಯದು, ಧನ ಸವೆಯದು, ಸತ್ಯದ ನುಡಿ ಸಾಧ್ಯವಾಗದು. ಕೇಳಿ ಕೇಳಿ, ಮೇಲೆ ಇನ್ನೇನಾದೀತು? ಪುರಾತರ ಚರಿತ್ರವನರಿದು, ಅಸತ್ಯಕ್ಕೆ ಲಿಂಗ ಒಲಿಯನೆಂಬುದನರಿದು ಅಸತ್ಯವನು [ನೀಗಿಸಿ] ವಾಙ್ಮನಪ್ರಾಣಾಧಿನಾಥ ಶರಣರಲ್ಲಿ ಸತ್ಯಸಂಭಾಷಣೆಯ ಕರುಣಿಸುವುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.