Index   ವಚನ - 287    Search  
 
ಶಿವನು ನರಕಾಯವ ತೊಟ್ಟು ಗುರುರೂಪಾಗಿ ಮರ್ತ್ಯಕ್ಕೆ ಬಂದು ಅಷ್ಟಾದಶಜಾತಿಯೊಳಗಿದ್ದಡೇನು ಮರ್ತ್ಯನೇ? ಅಲ್ಲ. ಅದೆಂತೆಂದಡೆ:ಶಿವರಹಸ್ಯೇ 'ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ' ಎಂದುದಾಗಿ, ಮಹಾದೇವನು ತಾನೇ_ 'ಲಲಾಟಲೋಚನಂ ಚಾಂದ್ರೀಕಲಾಮಪಿ ಚ ದೋರ್ದ್ವಯು ಅಂತರ್ನಿಧಾಯ ವರ್ತೇsಹಂ ಗುರುರೂಪೋ ಮಹೇಶ್ವರಿ' ಎಂದುದಾಗಿ, ಶಿವನು ಗುರುರೂಪಾಗಿ ವರ್ತಿಸುತ್ತಿಹನು. 'ಪರಶಿವೋ ಗುರುಮೂರ್ತಿಶ್ಶಿಷ್ಯದೀಕ್ಷಾದಿಕಾರಣಾತ್ ಶಿಷ್ಯಾತೀತಂ ಮಹಾಚೋದ್ಯಂ ಚೋದ್ಯರೂಪಾಯ ವೈ ನಮಃ' ಎಂದುದಾಗಿ, ಶಿಷ್ಯಂಗೆ ಕರುಣಿಸಿ ದೀಕ್ಷೆಯಂ ಮಾಡಬೇಕೆಂದು ಬಂದನಯ್ಯಾ, ಮಹಾಕಾರುಣ್ಯಮೂರ್ತಿ ಪರಮಶಿವನು ತಾನೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.