Index   ವಚನ - 292    Search  
 
ಶಿವಭಕ್ತನ ಕಂಡಲ್ಲಿ ಪಾಪ ಕೇಡುವುದು 'ಉಪಪಾತಕ ಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ' ಎಂದು, ಪ್ರಿಯಸಂಭಾಷಣೆಯಿಂದ ಕಾಮಿತ ಫಲವಪ್ಪುದು. ಆ ಪ್ರಸಾದಮಹಿಮನ ಪ್ರಸಾದದಿಂದ ಕೇವಲ ಮುಕ್ತಿಯಪ್ಪುದು. ಇದು ಸತ್ಯ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.