ಹಾಳೂರೊಳಗೊಂದು ಮನೆಯ ಮಾಡಿ ಬದುಕ ಹೋದಡೆ,
ಕಾಳೊರಗ ಬಂದು ಕಡಿಯಿತ್ತು ನೋಡಾ!
ಕೇರಿ ಕೇರಿಯೊಳಗೆಲ್ಲಾ ಹರಿದಾಡುತ್ತಿದ್ದವು,
ಮಾರಿಯ ತೋರದ ಮದಗಜಂಗಳು.
ಚಿತ್ರಗುಪ್ತನ ಕೈಯ ಚಿತ್ರವ ತಿಳಿದು ನೋಡಿದಡೆ,
ಹಾಳೂರು ಹಾಳಾಯಿತ್ತು ಗುಹೇಶ್ವರಾ.
Transliteration Hāḷūroḷagondu maneya māḍi baduka hōdaḍe,
kāḷoraga bandu kaḍiyittu nōḍā!
Kēri kēriyoḷagellā haridāḍuttiddavu,
māriya tōrada madagajaṅgaḷu.
Citraguptana kaiya citrava tiḷidu nōḍidaḍe,
hāḷūru hāḷāyittu guhēśvarā.
Hindi Translation उजडे गाँव में एक घर बनाकर जीने गये तॊ
काळोरग ने आ दंशन किया !
गली गली में रेंगते थे,
मारी के भयंकर मदगज !
चित्रगुप्त के हाथ का पत्र देखे तो
उजडा गाँव बिगडा गुहेश्वरा !
Translated by: Eswara Sharma M and Govindarao B N
Tamil Translation பாழ்பட்ட ஊரில் ஒரு வீட்டிலே வாழச் சென்றால்
கருநாகம் வந்து தீண்டியது காணாய்!
சேரிகளிலெல்லாம் படம் விரித்தாடியது.
பேருரு கொண்ட மதயானைகள் அங்குமிங்கும் ஓடின.
சித்திரகுப்தரின் கையிலுள்ள ஏட்டில்
பாவ புண்ணிய கணக்கை ஆராய்ந்து நோக்கின்
பாழ்பட்ட ஊர் பாழடைந்தது குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೇರಿಕೇರಿಗಳು = ಇಂದ್ರಿಯ ವೀಥಿಗಳು; ಕೈಯ ಪತ್ರ = ಕರ್ಮಾಶಯ ಹಾಗೂ ನೊಸಲ ಬರಹ; ಚಿತ್ರಗುಪ್ತರು = ಯಮನ ಕರಣಿಕರು, ಪಾಪ-ಪುಣ್ಯಗಳ ವರದಿ ಬರೆದಿಡುವವರು; ತಿಳಿದು ನೋಡು = ಅರಿತು ಅಳಿಸಿಹಾಕು; ಮದಗಜಂಗಳು = ಅಷ್ಟಮದಗಳೆಂಬ ಗಜಗಳು; ಮಾರಿಯ ತೋರಿದ = ಭಯಂಕರ ಗಾತ್ರದ;
Written by: Sri Siddeswara Swamiji, Vijayapura